Featured

ಚಟ-ಪಟ

ನಾನು ನೀರು ನೀನು ಎಣ್ಣೆ; ಬಿಸಿಯಾದಾಗ ನಾನು ನಿನ್ನ ಮೇಲೆ ಬಿದ್ದರೆ ಚಟಚಟ ಬಿಸಿಯಾದಾಗ ನೀನು ನನ್ನ ಮೇಲೆ ಬಿದ್ದರೆ ಪಟಪಟ; ತಣ್ಣಗಿದ್ದರೆ ನನ್ನ ಪಾಡಿಗೆ ನಾನು ನಿನ್ನ ಪಾಡಿಗೆ ನೀನು; ಇಬ್ಬರೂ ಬಿಸಿಯಾದಾಗ ನಡೆಯುವುದು ಒಂದಿಷ್ಟು ಆಗಾಗ (ಬಿಸಿ ಪದವನ್ನು ಸನ್ನಿವೇಶಕ್ಕೆ ತಕ್ಕ ಹಾಗೆ ಅರ್ಥಮಾಡಿಕೊಳ್ಳತಕ್ಕದ್ದು) ರಾ. ಬಂದೋಳ್

Featured

ಅ-ಭದ್ರತೆ

ಕಟ್ಟಿಕೊಂಡಿದ್ದೇವೆ ನಾವೂ ಮನೆಯನ್ನು ಹುಲ್ಲಿನ ಗುಡಿಸಲೇ ಆಗಿರಬಹುದು ಆದರೆ ಜತನದಿಂದ ಪಿರೂತಿಯಿಂದ ಗುಲ್ಲೆಬ್ಬಿಸಬೇಡಿ ಎಲ್ಲೆಲ್ಲೂ ನಾವೇನಾದರೂ ಕಣ್ಣು ಹಾಕಿದ್ದೇವ ನಿಮ್ಮ ಅರಗಿನ ಮನೆಗೆ?!! ಎಷ್ಟು ಚದರವೆಂದು ಲೆಕ್ಕ ಹಾಕಬೇಡಿ ನಮ್ಮದೇನು ಮನೆಯೊಳಗೊಂದು ಮನೆಯೇ! ನಡುಮನೆಯಿಂದ ಹಾಗೆ ಹೊರಳಿದರೆ ಅಡುಗೆ ಮನೆ ಹೀಗೆ ಹೊರಳಿದರೆ ಬಾಗಿಲು ಕೆಡವಬೇಡಿ ಕಣ್ಣುಗಳಿಂದ ಮುರಿಯಬೇಡಿ ಮೂತಿಯಿಂದ ಕೊಡವಬೇಡಿ ಕೈಗಳಿಂದ ತುಳಿಯಬೇಡ ಕಾಲುಗಳಿಂದ ಅದು ನಿಮಗೆ ಕೇವಲ ಗುಡಿಸಲೇ ಆಗಿರಬಹುದು ಆದರೆ ನಮಗೆ……..! ರಾ. ಬಂದೋಳ್

Featured

ಊದುಗೊಳವೆಯೊಳಗಿನ ಉಸಿರು

ಊದುಗೊಳವೆಯೊಳಗೆ ತೂರಿಬಂದ ಉಸಿರಿನಿಂದ ಬನಿಯನ್ನಿನ ರಂದ್ರಗಳಿಂದ ಮಾಸಿದ ಅಂಗಿಗಳಿಂದ ಹರಿದ ಕೊಳಪಟ್ಟಿಯೊಳಗಿಂದ ಹಿಮ್ಮಡಿಯ ಸೀಳುಗಳಿಂದ ಮೈಯ ಬೆವರ ಮಳೆಯಿಂದ ಕುಡಗೋಲು ಕುರ್ಚಿಗೆ ನೇಗಿಲು ಕುಂಟೆ ತಲೆ ಮೇಲಿನ ಹುಲ್ಲ ಹೊರೆ ಸೋತರೂ ಬಿಡದೆ ಹಿಡಿದ ರಟ್ಟೆಗಳಿಂದ ಮುಗ್ದ ನಗೆಯಿಂದ ನಿಟ್ಟುಸಿರ ಕಣ್ಣೀರಿನಿಂದ ಅರಳಿದ್ದೇನೆ ನಾನು, ನಾನೂ ಈಗೀಗ ಹಾಕಿದ ಬಟ್ಟೆಗಳನ್ನೇ ಹಾಕುತ್ತಿದ್ದೇನೆ ಹೊಸ ಚಪ್ಪಲಿಗಳನ್ನು ಕೊಳ್ಳುತ್ತಿಲ್ಲ ತಿರುಗಿಸುತ್ತಲಿದೆ ಮೆಲ್ಲನೆ ಕಾಲ ಬದುಕನ್ನೂ ಬದುಕು ಕಾಲವನ್ನೂ ರಾ. ಬಂದೋಳ್

Featured

ಭರಿಸಲಸದಳ

ಓಡೋಡಿ ದಣಿದುದೀರ್ಘ ನಿದ್ರಿಸಿಯೋಗ ಧ್ಯಾನ ಪ್ರಾಣಾಯಾಮಉಸಿರೆಳೆದು ಉಸಿರು ಬಿಟ್ಟುಚಿಕ್ಕ ಚಿಕ್ಕ ಜೋಕುಗಳಿಗುಕೇಕೆ ಹಾಕಿ ನಗುಬೆಟ್ಟಗಳ ಹತ್ತಿಳಿದುಮೃಗ-ಖಗ ಗಿಡ-ಮರಹೊಳೆ – ತೊರೆ ಕ್ಲಿಕ್ಕಿಸಿಉದ್ದುದ್ದ ಭಾಷಣಿಸಿಕಾವ್ಯ-ಕವಿತೆಬಣ್ಣ ಹಚ್ಚಿ ಪಾತ್ರ ಪರಾಕಾಯಏನು ಭರಿಸಬಲ್ಲುದು ನಿನ್ನಗಲಿಕೆಯ??! ರಾ. ಬಂದೋಳ್

Featured

ನೀನಾರಿಗಾದೆಯೋ ಎಲೆ ಮಾನವ

ನಿನ್ನೆ ನಾನು, ಪೂಜಾ, ಗೆಳೆಯರಾದ ರಜನಿ ಮತ್ತು ಹರೀ ಹೀಗೇ ಸ್ಪರ್ಧೆಗೆ ಬಿದ್ದಂತೆ ದಿನವೆಲ್ಲಾ ಹರಟಿದೆವು. ಮಧ್ಯಾಹ್ನ ಬಿರಿಯಾನಿ, ಮಧ್ಯೆ-ಮಧ್ಯೆ ಟೀ. ನಮ್ಮ ಊರಿನ ಮನೆಯಲ್ಲಿ ನಾವು ಹೇಗೆ ಯಶಸ್ವಿಯಾಗಿ ಸಗಣಿಯನ್ನು ಹೊರಗೆ ಅಟ್ಟಿದೆವು ಎಂಬುದನ್ನು ಹೇಳುತ್ತಿದ್ದೆ. ಸುಮಾರು ಹದಿನೈದು ವರ್ಷದ ಕೆಳಗೆ ನಮ್ಮ ಮನೆಯನ್ನು ಅಮ್ಮ, ‘ಇಟ್ಟರೆ ಸಗಣಿಯಾದೆ, ತಟ್ಟಿದರೆ ಕುರುಳಾದೆ, ಸುಟ್ಟರೆ ನೊಸಲಿಗೆ ವಿಭೂತಿಯಾದೆ, ತಟ್ಟದೇ ಹಾಕಿದರೆ ಮೇಲುಗೊಬ್ಬರವಾದೆ, ನೀನಾರಿಗಾದೆಯೋ ಎಲೆ ಮಾನವ?!! (ಎಸ್. ಜಿ. ನರಸಿಂಚಾರ್)’ ದ ಸಗಣಿಯಿಂದ ವಾರಕ್ಕೊಂದು ಸಾರಿಯಾದರೂ ನೆಲContinue reading “ನೀನಾರಿಗಾದೆಯೋ ಎಲೆ ಮಾನವ”

ಕತೆ: ಕುಲ ಹೊಲೆ

ನಡೆನುಡಿ ಸಿದ್ಧಾಂತವಾದಲ್ಲಿ, ಕುಲ ಹೊಲೆ ಸೂತಕವಿಲ್ಲ.ನುಡಿ ಲೇಸು, ನಡೆಯಧಮವಾದಲ್ಲಿ,ಅದು ಬಿಡುಗಡೆಯಿಲ್ಲದ ಹೊಲೆ.ಕಳವು ಪಾರದ್ವಾರಂಗಳಲ್ಲಿ ಹೊಲಬನರಿಯದೆ,ಕೆಟ್ಟು ನಡೆವುತ್ತ, ಮತ್ತೆ ಕುಲಜರೆಂಬ ಒಡಲವರುಂಟೆ ?ಆಚಾರವೆ ಕುಲ, ಅನಾಚಾರವೆ ಹೊಲೆ.ಇಂತೀ ಉಭಯವ ತಿಳಿದರಿಯಬೇಕು.ಕೈಯುಳಿ ಕತ್ತಿ ಅಡಿಗೂಂಟಕ್ಕಡಿಯಾಗಬೇಡ,ಅರಿ ನಿಜಾ[ತ್ಮಾ] ರಾಮ ರಾಮನಾ.-ಮಾದಾರ ಚೆನ್ನಯ್ಯಚಂದ್ರು ನನ್ನ ಬಾಲ್ಯದ ಅಚ್ಚುಮೆಚ್ಚಿನ ಗೆಳೆಯ. ನಾನು ಒಂದರಿಂದ ನಾಲ್ಕನೆಯ ತರಗತಿಯವರೆಗೆ ನಮ್ಮ ಊರಿನಲ್ಲಿ ವಿದ್ಯಾಭ್ಯಾಸ ಮಾಡಿದೆ. ನಂತರ ಶಿವಮೊಗ್ಗೆಯ ಸಮೀಪದ ಗಾಜನೂರಿನಲ್ಲಿ ವಿದ್ಯಾಭ್ಯಾಸ ಮುಂದುವರೆಸಿದೆ. ನನ್ನ ಬಾಲ್ಯದ ಆಟ-ಊಟ-ಪಾಠಗಳ ಬಹುಮುಖ್ಯ ಜತೆಗಾರರಲ್ಲಿ ಚಂದ್ರು ಒಬ್ಬ. ನಾವು ಶಾಲೆಯಲ್ಲಿ ಎತ್ತಾಟ(ಎತ್ತಿನContinue reading “ಕತೆ: ಕುಲ ಹೊಲೆ”

ಬೆತ್ತಲೆಂದರೆ ಏಕೋ ಮೋಹ…

ಕ್ಯಾನ್ವಾಸಿನಲಿಮೂಡಿದಅವಳುಸಪಾಟ ಬೆನ್ನನುಮುಖವಾಗಿಸಿ ಕುಳಿತಿದ್ದಾಳೆಬೆನ್ನ ಹುರಿಯಲಿಅಮೃತದ ನದಿಯೊಂದು ಹರಿದಂತೆನಡುವಿನ ಸಾಗರವ ಸೇರಿದಂತೆಕೊಂಚ ತಿರುಗಿದ ಮೊಗದಲಿಮೋಹಕ ತಾವರೆ ನಗುಗಾಳಿಯೆಲ್ಲಾ ಹೂನಗುವಿನ ಗಂಧಮೊಲೆಗಳು ನಾಚಿಕೆಯಲಿಕೊಂಚವೇ ಇಣುಕಿ ನೋಡುತ್ತಿವೆನೋಡುತ್ತಾ ನಾಚಿ ನೀರಾಗಿದ್ದೇನೆಬೆತ್ತಲೆಂದರೆಏಕೋಮೋಹ… ರಾ. ಬಂದೋಳ್

ಎಫಿಮೆರಲ್

ಎಫಿಮೆರಲ್ಮಂಜುಳೆ ಮನೆ ಬದಲಿಸಿ ಈಗ ಒಬ್ಬಳೇ ಇದ್ದಳು. ಮುಂಬರುವ ಪ್ರಶ್ನೆಗಳಿಗೆ ಉತ್ತರಿಸುವುದು ಕಷ್ಟವೆಂದು ತಿಳಿದ ಮಂಜುಳ ಕೆನಸಕ್ಕೆ ರಾಜಿನಾಮೆ ನೀಡಿದ್ದಳು. ಕಷ್ಟಪಟ್ಟು ಪ್ರಾಮಾಣಿಕವಾಗಿ ದುಡಿಯುವ ಹುಡುಗಿಯಾದ್ದರಿಂದ ಮ್ಯಾನೇಜರ್ ಕೆಲಸದಲ್ಲಿ ಮುಂದುವರೆಯುವಂತೆ ಕೇಳಿಕೊಂಡದ್ದು ಪ್ರಯೋಜನಕ್ಕೆ ಬರಲಿಲ್ಲ. ಆವತ್ತು ಆಕೆಯ ಕೆಲಸದ ಕೊನೇ ದಿನ. ಸಂಜೆ ಐದಕ್ಕೆ ಆಫೀಸ್ ಮುಗಿಯುವುದಾದರೂ ನಾಲ್ಕಕ್ಕೇ ಹೊರಟಳು. ಟೋಲ್ ಗೇಟ್ ನಿಂದ ಬಸ್ ಹಿಡಿದು ಅವಳ ರೂಮ್ ಇರುವ ಮಾಗಡಿ ರಸ್ತೆಯಲ್ಲಿರುವ ಸುಂಕದಕಟ್ಟೆಯಲ್ಲಿ ಇಳಿದು ಹತ್ತಿರದಲ್ಲೇ ಇರುವ ಫ್ಯಾನ್ಸಿ ಶಾಪ್ ಗೆ ಹೋಗಿ ಕರಿಮಣಿಯContinue reading “ಎಫಿಮೆರಲ್”

ಸತ್ಯವೆಂಬುದು ಕ್ರೂರ ಸುಂದರಿ

ರಾತ್ರಿಯ ಕತ್ತಲಿಗೆಬೆಂಕಿ ತಗುಲಿಸಿಚಂದ್ರನ ಎಚ್ಚರವಿರಿಸಿಪಿಸುಗುಟ್ಟಿದ್ದಾದರೂ ಏನು! ಹಗಲೆಲ್ಲವನು ಕರಗಿಸಿಮಸಿಯಾಗಸಿಅಂಗಾಲುಗಳಿಂದದಾರಿಗುಂಟ ಬರೆದದ್ದಾದರೂ ಏನು! ಹೂವಿನ ಗಂಧಇರುವವರೆಗಷ್ಟೇ ಸತ್ಯವೇ? ಮಕರಂಧ ಹೊತ್ತು ಹೋದದುಂಬಿಗಳು ನೆನಪಿಟ್ಟ ಹೂಗಳೆಷ್ಟು?! ಚಪ್ಪಲಿ ಹರಿದ ಮೇಲೆತನ್ನ ಹೊತ್ತಿತೆಂದು ಹೊರುವವರ್ಯಾರು?ನಿರ್ಜೀವ ರೂಪಕವಾದರೂ ಸತ್ಯವಲ್ಲವೇ? ಸತ್ಯವೆಂಬುದು ಕ್ರೂರ ಸುಂದರಿ. ರಾ. ಬಂದೋಳ್

ಬೆತ್ತಲು

ಅವಳ ಅಂಗಿಯ ಮೊದಲೆರಡು ಗುಂಡಿಗಳ ಸಡಿಲಿಸಿ ಅವಳೆದೆಯ ಮೇಲೆ ಮಲಗಿ ‘ಸಂತಸ ತಳಮಳಗಳ ಸಂಗಮ’ ಅಂದ ರೂಪವಂತ, ಪ್ರತಿರೂಪ ಸಣ್ಣಗೆ ನಕ್ಕಳು. “ನಿನ್ನನ್ನು ಪ್ರೀತಿಸಿದಷ್ಟು ನಾನು ಯಾರನ್ನೂ ಪ್ರೀತಿಸಿಲ್ಲ” ಅಂದಳು. ‘ಪ್ರೀತಿಯಲ್ಲಿ ಅಷ್ಟು-ಇಷ್ಟು ಏಂಬುದೆಲ್ಲಾ ಹೌದಾ?’, ರೂಪವಂತ ಅವಳು ಕೆಲ ಹೊತ್ತು ಸುಮ್ಮನಿದ್ದು ನಂತರ ಹೇಳಿದಳು “ಇಲ್ಲ”.“ನಾನೊಂದು ಕೇಳಲಾ?!” ಎಂದಳು‘ಕೇಳು!’“ನಿನ್ನನ್ನು ಮಾತ್ರ ಪ್ರೀತಿಸುತ್ತೇನೆ ಎನ್ನುವುದು ನಿಜವಾ?”ರೂಪವಂತನ ಅಹಂಗೆ ಪೆಟ್ಟು ಬಿದ್ದಹಾಗಾಯಿತು‘ಅಲ್ಲ ಮತ್ತು ಅದು ನಾನು ಇಷ್ಟಪಡದ ಸತ್ಯ, ನನಗೆ ಬೇಕಾಗಿಲ್ಲದ ಸತ್ಯ, ಕನಿಷ್ಟ ಪಕ್ಷ ಈ ಕ್ಷಣಕ್ಕೆContinue reading “ಬೆತ್ತಲು”

ಶರಣು

ನಾ ಕೇಳಿದ್ದನ ಹನುಮಪ್ಪಕೊಡಲಿಲ್ಲೆಂದು ಬಿಡಾಂಗಿಲ್ಲನೀ ರಾಮಪ್ಪನ ಸೀತವ್ವನಎದೆ ಹರಿದು ತೋರಿಸಿದಂಗೆನಾ ತೋರಿಸಲಾಗೋದಿಲ್ಲ ಕರೆಹಾಗಂತ ಭಕ್ತಿ ಸುಳ್ಳಲ್ಲನಿನ ಕೂಡೆ ಜಗಳ ಆಡತೀನಿಮಾತು ಬಿಡತೀನಿನಿನ ಮುಂದೆ ಚಕ್ಕಳ ಮಕ್ಕಳ ಕೂತುಹಠ ಹಿಡಿತೇನಿನಿನ್ನಲ್ಲದೇ ಇನ್ಯಾರ ಕೇಳಬೇಕು!ಒಂದೇ ಒಂದು ಹೂ ಕೆಳಗಿಳಿಸುಮನಸ್ಸು ಹೈರಾಣಾಗ್ಯದಾಮತ್ತೆ ಯಾಕ ಸುಮ್ಕ ನಿಂತೀಉದುರ್ಸು ಮತ್ತಾ!ರಾ. ಬಂದೋಳ್

ನೀ ಮಾಯೆಯೊಳಗೋ!

ನೀ ಮಾಯೆಯೊಳಗೋ!ರಾತ್ರಿ ಎರಡಾಗುವುದನ್ನೇ ಕಾಯುತ್ತಿದ್ದ ಪ್ರಕಾಶ ನಿಧಾನವಾಗಿ ಮೊಬೈಲ್ ಟಾರ್ಚ್ ಆನ್ ಮಾಡಿಕೊಂಡು, ಕಳ್ಳ ನಡಿಗೆಯಲ್ಲಿ ಟೆರೇಸಿನ ಮೆಟ್ಟಿಲುಗಳ ಹತ್ತಿರ ಬಂದು ಮೆಲ್ಲಗೆ ಮೆಟ್ಟಿಲೇರಿದ. ಆಗಲೇ ರೂಮ್ ಮೇಟ್ ಗಳಾದ ಪ್ರಶಾಂತ ಹಾಗು ವಸಂತ ಇಬ್ಬರೂ ಭಾರೀ ಕುತೂಹಲದಿಂದ ಕೆಳಗೆ ನೋಡುತ್ತಿದ್ದರು.*****ನಿನ್ನೆ ಮೆಟ್ಟಿಲುಗಳ ಬಳಿಯೇ ಇರುವ ಈ ರೂಮನ್ನು ಮಧ್ಯಾಹ್ನ ಹಾಯ್ದು ಹೋಗುವಾಗ ಪ್ರಕಾಶನಿಗೆ ಬಳೆಯ ಸದ್ದು ಕೇಳಿಸಿದ್ದು ಹೌದಾದರೂ, ಅದು ಬೇರೆಲ್ಲಿಂದಲೋ ಬಂದ ಸದ್ದು ಈ ರೂಮಿಂದ ಬಂದಿದೆ ಅಂತ ಅನ್ನಿಸ್ತಿದೆ ಅಂದುಕೊಂಡು ರೂಮು ಸೇರಿಕೊಂಡಿದ್ದ.Continue reading “ನೀ ಮಾಯೆಯೊಳಗೋ!”

ವಾರ-ಅಂತ್ಯವಲ್ಲ

ತನ್ನೊಳಗಿರುವ ಜೀವಿಗಳನ್ನೆಲ್ಲಾವೀಕೆಂಡ್ ಎಂಬ ತೀರಕ್ಕೆ ಎಸೆಯುತ್ತದೆಈ ನಗರ ಸಾಗರಕಾಲುಕಾಲಿಗೆ ಸಿಗುವತಲೆಯೆತ್ತಿದರೆ ತಲೆಗಳಷ್ಟೇ ಕಾಣುವಜನವೋ ಜನಭೈಯ್ಯಾ ಒನ್ ಮಸಾಲ ಡೋಸ ಕೊಡಿಎನ್ನುತ್ತವೆಅವಕ್ಕವೆ ಮೇಲೇರುವ ಮೆಟ್ಟಿಲುಗಳಲ್ಲಿ ಏರಿರಂಗುರಂಗಿನ ಸಂತೆ ಮಾಟಬೀದಿಯಲ್ಲಿ ಚೌಕಾಸಿ ಗುದ್ದಾಟಹಗಲಿನಲ್ಲಿ ಕಣ್ಣ ಮುಚ್ಚಿ ನಿದ್ದೆ ಮಾಡಿಕಣ್ಣಾಲಿಗಳು ರಾತ್ರಿಯ ರಂಗಿನಲಿ ಮಂದ ಬೆಳಕಿಗಾಗಿ ಹುಡುಕುತ್ತವೆಬೇಡದ್ದನ್ನೆಲ್ಲ ಕತ್ತಲಿನ ಕಪ್ಪಿನಲಿ ಮುಚ್ಚುತ್ತವೆನಶೆಯೇರುತ್ತವೆ ಬಣ್ಣವುಡುತ್ತವೆ ಉಣ್ಣುತ್ತವೆಆಗಾಗ ಬಣ್ಣಗೆಡುತ್ತವೆ!ರಾ. ಬಂದೋಳ್

ಈ ಜೀವನ ಅವನ ಇನಾಮು: ೧. ಆಗಸ್ಟ್ ೨೦೨೦ರ ಒಂದು ದಿನ ಅದೆಲ್ಲ ಶುರುವಾದದ್ದು

ಆಗಿನ್ನೂ ಮೊದಲ ಲಾಕ್ ಡೌನ್ ನಲ್ಲಿದ್ದೆವು. ನಾನು ನನ್ನ ಸರ್ಕಾರಿ ನೌಕರಿಗೆ ರಾಜಿನಾಮೆ ನೀಡಿ ಊರಿಗೆ ಮರಳುತ್ತಿದ್ದೆ. ಪೋರ್ಟಬ್ಲೇರ್ ನಿಂದ ಬೆಂಗಳೂರಿಗೆ ನೇರ ವಿಮಾನಯಾನ. ಮಾಸ್ಕ್, ಫೇಸ್ ಶೀಲ್ಡ್ ಧರಿಸಿ ಕೋವಿಡ್ ಹರಡುವ ಆತಂಕದಲ್ಲೇ ಪ್ರಯಾಣ ಮಾಡಿದೆ. ಬೆಂಗಳೂರಿಗೆ ಬಂದಿಳಿದೊಡನೆ ಟೆಂಪರೇಚರ್, ಆಕ್ಸಿಜನ್ ಲೆವಲ್ ಚೆಕ್ ಮಾಡಿ ಬಲ ಮುಷ್ಠಿಯ ಮೇಲೆ ನಾನು ಎಲ್ಲಿಯವರೆಗೆ ಐಸೊಲೇಷನ್ ನಲ್ಲಿ ಇರಬೇಕೆಂಬ ದಿನಾಂಕ ನಮೂದಿಸಿದ್ದರು. ಕೋವಿಡ್ ನಿಯಮಾವಳಿಯಂತೆ ನಾನು ನಮ್ಮ ಹಳ್ಳಿ ಸೊರಟೂರಿನ ಸಮೀಪದ ನಮ್ಮ ತಾಲ್ಲೂಕು ಕೇಂದ್ರ ಹೊನ್ನಾಳಿಯContinue reading “ಈ ಜೀವನ ಅವನ ಇನಾಮು: ೧. ಆಗಸ್ಟ್ ೨೦೨೦ರ ಒಂದು ದಿನ ಅದೆಲ್ಲ ಶುರುವಾದದ್ದು”

The rain last for four years, eleven months and two days

The rain last for four years, eleven months and two daysಮಾರ್ಕ್ವೆಜ್ ನ ಮೊಕಾಂಡೋದಲ್ಲಿಹೀಗೊಂದು ಮಳೆ ಬಿತ್ತಂತೆನಮ್ಮೂರುಗಳಲ್ಲಿ ಹೀಗೊಂದು ಮಳೆಯಾಗಿಒದ್ದೆಯಾದ ಬೆಂಕಿ ಪೊಟ್ಟಣದ ಕಡ್ಡಿಗಳುಠುಸ್ ಎನ್ನುವಂತೆಪಿರಂಗಿಗಳು ಠುಸ್ ಎನ್ನಲಿನೆತ್ತರು ತೊಳೆದು ಹಸಿರು ಹುಟ್ಟಲಿಬಿಳಿಯ ಬಟ್ಟೆಗೆ ಸೂಟು ಬೂಟುಗಳಿಗೆ ಕೆಸರು ಚಿಮ್ಮಲಿಕಂತೆ ಕಂತೆ ನೋಟುಗಳು ಅಂಟಿಗೊಂಡು ರದ್ದಿಯಾಗಲಿಬಚ್ಚಲ ರೊಜ್ಜೆ ಒಯ್ಯುವ ನದಿಗಳಿಗೆ ಜೀವ ಬರಲಿಮೇಕಪ್ಪು ಮುಖವಾಡಗಳು ತೊಳೆದು ಹೋಗಲಿಆಗಿನ್ನು ಗರ್ಭದಿಂದ ಬಂದ ಮಗುವಿನಂತೆಕಾಣಲಿ ಕಣ್ಣಗಳು ಹೊಳೆಯಲಿರಾ. ಬಂದೋಳ್