Featured

ಭರಿಸಲಸದಳ

ಓಡೋಡಿ ದಣಿದುದೀರ್ಘ ನಿದ್ರಿಸಿಯೋಗ ಧ್ಯಾನ ಪ್ರಾಣಾಯಾಮಉಸಿರೆಳೆದು ಉಸಿರು ಬಿಟ್ಟುಚಿಕ್ಕ ಚಿಕ್ಕ ಜೋಕುಗಳಿಗುಕೇಕೆ ಹಾಕಿ ನಗುಬೆಟ್ಟಗಳ ಹತ್ತಿಳಿದುಮೃಗ-ಖಗ ಗಿಡ-ಮರಹೊಳೆ – ತೊರೆ ಕ್ಲಿಕ್ಕಿಸಿಉದ್ದುದ್ದ ಭಾಷಣಿಸಿಕಾವ್ಯ-ಕವಿತೆಬಣ್ಣ ಹಚ್ಚಿ ಪಾತ್ರ ಪರಾಕಾಯಏನು ಭರಿಸಬಲ್ಲುದು ನಿನ್ನಗಲಿಕೆಯ??! ರಾ. ಬಂದೋಳ್

Featured

ನೀನಾರಿಗಾದೆಯೋ ಎಲೆ ಮಾನವ

ನಿನ್ನೆ ನಾನು, ಪೂಜಾ, ಗೆಳೆಯರಾದ ರಜನಿ ಮತ್ತು ಹರೀ ಹೀಗೇ ಸ್ಪರ್ಧೆಗೆ ಬಿದ್ದಂತೆ ದಿನವೆಲ್ಲಾ ಹರಟಿದೆವು. ಮಧ್ಯಾಹ್ನ ಬಿರಿಯಾನಿ, ಮಧ್ಯೆ-ಮಧ್ಯೆ ಟೀ. ನಮ್ಮ ಊರಿನ ಮನೆಯಲ್ಲಿ ನಾವು ಹೇಗೆ ಯಶಸ್ವಿಯಾಗಿ ಸಗಣಿಯನ್ನು ಹೊರಗೆ ಅಟ್ಟಿದೆವು ಎಂಬುದನ್ನು ಹೇಳುತ್ತಿದ್ದೆ. ಸುಮಾರು ಹದಿನೈದು ವರ್ಷದ ಕೆಳಗೆ ನಮ್ಮ ಮನೆಯನ್ನು ಅಮ್ಮ, ‘ಇಟ್ಟರೆ ಸಗಣಿಯಾದೆ, ತಟ್ಟಿದರೆ ಕುರುಳಾದೆ, ಸುಟ್ಟರೆ ನೊಸಲಿಗೆ ವಿಭೂತಿಯಾದೆ, ತಟ್ಟದೇ ಹಾಕಿದರೆ ಮೇಲುಗೊಬ್ಬರವಾದೆ, ನೀನಾರಿಗಾದೆಯೋ ಎಲೆ ಮಾನವ?!! (ಎಸ್. ಜಿ. ನರಸಿಂಚಾರ್)’ ದ ಸಗಣಿಯಿಂದ ವಾರಕ್ಕೊಂದು ಸಾರಿಯಾದರೂ ನೆಲContinue reading “ನೀನಾರಿಗಾದೆಯೋ ಎಲೆ ಮಾನವ”

ಸಾಗರದ ಅಂಚು

ಸಾಗರದ ಅಂಚು ಸಾಗರದ ಅಂಚಿನಲ್ಲಿ ಮರಳ ಹಾಸಿನ ಮೇಲೆ ನಡೆಯುತ್ತಾ ತಮ್ಮ ಪಾದಗಳಿಗೆ ಬಡಿಯುತ್ತಿರುವ ಅಲೆಗಳ ಮೂಲಕ ಅವರೂ ಸಾಗರದೊಂದಿಗೆ ಒಂದಾಗುತ್ತಿದ್ದರು. ಅಗೋ ಅಲ್ಲಿ ರವಿಯೂ. ಬೆಸ್ತರು ತಮ್ಮ ಬಲೆಗಳನ್ನು ಎಳೆದು, ಹೆಣೆದು ಹೆಗಲಿಗೇರಿಸಿ ಮನೆಗೆ ತೆರಳಲು ಸಿದ್ಧರಾಗುತ್ತಿದ್ದರು ತಮ್ಮ ಅಂದಿನ ಅದೃಷ್ಟದ ಮೀನುಗಳೊಟ್ಟಿಗೆ. ಎಳೆಯರು ತಮ್ಮ ಎಳೇ ಮೈಯನ್ನು ಅಲೆಗಳಿಗೆ ಅಡ್ಡಗಟ್ಟಲು ಪ್ರಯತ್ನಿಸಿ ಸೋಲುತ್ತಾ ಆಟವಾಡುತ್ತಿದ್ದರು. ಕೆಲ ಹೊತ್ತು ಓಡಾಡಿದ ಮೇಲೆ ಅಲ್ಲೇ ಮರಳ ಹಾಸಿನ ಮೇಲೆ ಅವರಿಬ್ಬರು ಕುಳಿತು ಮಾತನಾಡುತ್ತಿದ್ದರು. ಮಗು ಮರಳಿನ ಮೇಲೆContinue reading “ಸಾಗರದ ಅಂಚು”

ಬೇಡವೇ ಬೇಡ

ಬೇಡವೇ ಬೇಡಎಂದೋ ಕಳೆದು ಹೋದ ಅವಳುಹೆಂಡತಿ ಹೇಳಿದ ಕೊತ್ತಂಬರಿ ಸೊಪ್ಪು ಕೊಳ್ಳುವಾಗ ಅದೇ ತರಕಾರಿ ಅಂಗಡಿಯಲ್ಲಿ ಟೊಮ್ಯಾಟೋ ಕೊಳ್ಳಲು ಬಂದವಳು ಕಣ್ಣಂಚಿಗೆ ಸಿಗುವುದು ಬೇಡ ಆಫೀಸು ಸೇರುವ ಮುನ್ನ ಸಿಗುವ ಆ ಕೊನೆ ಸಿಗ್ನಲ್ಲಿನಲ್ಲಿ ನಾನು ಕಾರ್ ನಲ್ಲಿ ಇರುವಾಗ ಅವಳು ಸ್ಕೂಟರ್ ನಲ್ಲಿ ನನ್ನ ಪಕ್ಕದಲ್ಲೇ ಬಂದು ನಿಲ್ಲುವುದು ಬೇಡ ಮಾಲುಗಳಲ್ಲಿ ಬಟ್ಟೆ ಕೊಂಡು ಸಿನಿಮಾ ನೋಡಿ ಫುಡ್ ಕೋರ್ಟ್ ನಲ್ಲಿ ಊಟ ಮಾಡಿ ಲಿಫ್ಟ ನಲ್ಲಿ ಪಾರ್ಕಿಂಗ್ ಲಾಟ್ ಗೆ ಹೋಗುವಾಗ ಅವಳು ಅದೇContinue reading “ಬೇಡವೇ ಬೇಡ”

ಸ್ಪರ್ಶಿಗ ಕತ್ತಲಿನ ಟೆಂಟನ್ನು ನೆಲಕ್ಕೆ ಎಳೆದು ಮೊಳೆ ಹೊಡೆದು ಒಳಗಿರುತ್ತೇನೆ ಅಡಗಿರುವುದಿಲ್ಲ; ಕತ್ತಲಿನ ಒಂದೊಂದೇ ನೂಲುಗಳನ್ನು ಎಳೆದು ಗೂಡು ಕಟ್ಟಿ ಒಳಗೆ ಬೆಚ್ಚಗಿರುತ್ತೇನೆ; ನೋಟದಿಂದ ಕೂಡಿದ್ದು ಕಳೆದದ್ದು ಸಾಕು ರೂಪು ರೇಖೆ ಉದ್ದಗಲಗಳ ಅಳೆದದ್ದು ಸಾಕು; ಸ್ಪರ್ಶ ಹೆಚ್ಚು ಸತ್ಯ, ಪ್ರೀತಿಯ ಸ್ಪರ್ಶಕ್ಕೆ ರೋಮಗಳ ಅರಳಿಸು ಮೈಯೊಳಗೆ ಕಾಮನಬಿಲ್ಲು; ರಾ. ಬಂದೋಳ

ಕತೆ: ಕುಲ ಹೊಲೆ

ನಡೆನುಡಿ ಸಿದ್ಧಾಂತವಾದಲ್ಲಿ, ಕುಲ ಹೊಲೆ ಸೂತಕವಿಲ್ಲ.ನುಡಿ ಲೇಸು, ನಡೆಯಧಮವಾದಲ್ಲಿ,ಅದು ಬಿಡುಗಡೆಯಿಲ್ಲದ ಹೊಲೆ.ಕಳವು ಪಾರದ್ವಾರಂಗಳಲ್ಲಿ ಹೊಲಬನರಿಯದೆ,ಕೆಟ್ಟು ನಡೆವುತ್ತ, ಮತ್ತೆ ಕುಲಜರೆಂಬ ಒಡಲವರುಂಟೆ ?ಆಚಾರವೆ ಕುಲ, ಅನಾಚಾರವೆ ಹೊಲೆ.ಇಂತೀ ಉಭಯವ ತಿಳಿದರಿಯಬೇಕು.ಕೈಯುಳಿ ಕತ್ತಿ ಅಡಿಗೂಂಟಕ್ಕಡಿಯಾಗಬೇಡ,ಅರಿ ನಿಜಾ[ತ್ಮಾ] ರಾಮ ರಾಮನಾ.-ಮಾದಾರ ಚೆನ್ನಯ್ಯಚಂದ್ರು ನನ್ನ ಬಾಲ್ಯದ ಅಚ್ಚುಮೆಚ್ಚಿನ ಗೆಳೆಯ. ನಾನು ಒಂದರಿಂದ ನಾಲ್ಕನೆಯ ತರಗತಿಯವರೆಗೆ ನಮ್ಮ ಊರಿನಲ್ಲಿ ವಿದ್ಯಾಭ್ಯಾಸ ಮಾಡಿದೆ. ನಂತರ ಶಿವಮೊಗ್ಗೆಯ ಸಮೀಪದ ಗಾಜನೂರಿನಲ್ಲಿ ವಿದ್ಯಾಭ್ಯಾಸ ಮುಂದುವರೆಸಿದೆ. ನನ್ನ ಬಾಲ್ಯದ ಆಟ-ಊಟ-ಪಾಠಗಳ ಬಹುಮುಖ್ಯ ಜತೆಗಾರರಲ್ಲಿ ಚಂದ್ರು ಒಬ್ಬ. ನಾವು ಶಾಲೆಯಲ್ಲಿ ಎತ್ತಾಟ(ಎತ್ತಿನContinue reading “ಕತೆ: ಕುಲ ಹೊಲೆ”

ಬೆತ್ತಲೆಂದರೆ ಏಕೋ ಮೋಹ…

ಕ್ಯಾನ್ವಾಸಿನಲಿಮೂಡಿದಅವಳುಸಪಾಟ ಬೆನ್ನನುಮುಖವಾಗಿಸಿ ಕುಳಿತಿದ್ದಾಳೆಬೆನ್ನ ಹುರಿಯಲಿಅಮೃತದ ನದಿಯೊಂದು ಹರಿದಂತೆನಡುವಿನ ಸಾಗರವ ಸೇರಿದಂತೆಕೊಂಚ ತಿರುಗಿದ ಮೊಗದಲಿಮೋಹಕ ತಾವರೆ ನಗುಗಾಳಿಯೆಲ್ಲಾ ಹೂನಗುವಿನ ಗಂಧಮೊಲೆಗಳು ನಾಚಿಕೆಯಲಿಕೊಂಚವೇ ಇಣುಕಿ ನೋಡುತ್ತಿವೆನೋಡುತ್ತಾ ನಾಚಿ ನೀರಾಗಿದ್ದೇನೆಬೆತ್ತಲೆಂದರೆಏಕೋಮೋಹ… ರಾ. ಬಂದೋಳ್

ಸತ್ಯವೆಂಬುದು ಕ್ರೂರ ಸುಂದರಿ

ರಾತ್ರಿಯ ಕತ್ತಲಿಗೆಬೆಂಕಿ ತಗುಲಿಸಿಚಂದ್ರನ ಎಚ್ಚರವಿರಿಸಿಪಿಸುಗುಟ್ಟಿದ್ದಾದರೂ ಏನು! ಹಗಲೆಲ್ಲವನು ಕರಗಿಸಿಮಸಿಯಾಗಸಿಅಂಗಾಲುಗಳಿಂದದಾರಿಗುಂಟ ಬರೆದದ್ದಾದರೂ ಏನು! ಹೂವಿನ ಗಂಧಇರುವವರೆಗಷ್ಟೇ ಸತ್ಯವೇ? ಮಕರಂಧ ಹೊತ್ತು ಹೋದದುಂಬಿಗಳು ನೆನಪಿಟ್ಟ ಹೂಗಳೆಷ್ಟು?! ಚಪ್ಪಲಿ ಹರಿದ ಮೇಲೆತನ್ನ ಹೊತ್ತಿತೆಂದು ಹೊರುವವರ್ಯಾರು?ನಿರ್ಜೀವ ರೂಪಕವಾದರೂ ಸತ್ಯವಲ್ಲವೇ? ಸತ್ಯವೆಂಬುದು ಕ್ರೂರ ಸುಂದರಿ. ರಾ. ಬಂದೋಳ್

ಬೆತ್ತಲು

ಅವಳ ಅಂಗಿಯ ಮೊದಲೆರಡು ಗುಂಡಿಗಳ ಸಡಿಲಿಸಿ ಅವಳೆದೆಯ ಮೇಲೆ ಮಲಗಿ ‘ಸಂತಸ ತಳಮಳಗಳ ಸಂಗಮ’ ಅಂದ ರೂಪವಂತ, ಪ್ರತಿರೂಪ ಸಣ್ಣಗೆ ನಕ್ಕಳು. “ನಿನ್ನನ್ನು ಪ್ರೀತಿಸಿದಷ್ಟು ನಾನು ಯಾರನ್ನೂ ಪ್ರೀತಿಸಿಲ್ಲ” ಅಂದಳು. ‘ಪ್ರೀತಿಯಲ್ಲಿ ಅಷ್ಟು-ಇಷ್ಟು ಏಂಬುದೆಲ್ಲಾ ಹೌದಾ?’, ರೂಪವಂತ ಅವಳು ಕೆಲ ಹೊತ್ತು ಸುಮ್ಮನಿದ್ದು ನಂತರ ಹೇಳಿದಳು “ಇಲ್ಲ”.“ನಾನೊಂದು ಕೇಳಲಾ?!” ಎಂದಳು‘ಕೇಳು!’“ನಿನ್ನನ್ನು ಮಾತ್ರ ಪ್ರೀತಿಸುತ್ತೇನೆ ಎನ್ನುವುದು ನಿಜವಾ?”ರೂಪವಂತನ ಅಹಂಗೆ ಪೆಟ್ಟು ಬಿದ್ದಹಾಗಾಯಿತು‘ಅಲ್ಲ ಮತ್ತು ಅದು ನಾನು ಇಷ್ಟಪಡದ ಸತ್ಯ, ನನಗೆ ಬೇಕಾಗಿಲ್ಲದ ಸತ್ಯ, ಕನಿಷ್ಟ ಪಕ್ಷ ಈ ಕ್ಷಣಕ್ಕೆContinue reading “ಬೆತ್ತಲು”